ಕಿಂದಮ

 ಒಬ್ಬ ಋಷಿ. ಪಾಂಡುವಿನ ಅಕಾಲಮರಣಕ್ಕೆ ನಿಮಿತ್ತನಾದವ. ಹಗಲು ಹೊತ್ತಿನಲ್ಲಿ ಪ್ರಾಪಂಚಿಕ ಸುಖವನ್ನನುಭವಿಸಬೇಕೆಂಬ ಇಚ್ಛೆಯಿಂದೀತ ಒಂದು ದಿನ ಜಿಂಕೆಯ ರೂಪವನ್ನು ತಳೆದು ತನ್ನ ಸತಿಯೊಂದಿಗೆ ಕ್ರೀಡಿಸುತ್ತಿದ್ದ. ಬೇಟೆಗಾಗಿ ಕಾಡಿಗೆ ಬಂದಿದ್ದ ಪಾಂಡುರಾಜ ಹರಿಣರೂಪದಿಂದಿದ್ದ ಕಿಂದಮನಿಗೆ ಗುರಿಯಿಟ್ಟು ಬಾಣಪ್ರಯೋಗ ಮಾಡಿದ. ನೊಂದ ಕಿಂದಮ ಸಾಯುವ ಮೊದಲು ಪಾಂಡುವನ್ನುದ್ದೇಶಿಸಿ 'ನೀನು ನಿನ್ನ ಮಡದಿಯೊಂದಿಗೆ ಕ್ರೀಡಿಸಿದಾಗ ನನ್ನಂತೆ ಮರಣಹೊಂದು' ಎಂದು ಶಾಪವಿತ್ತು ಸತ್ತ.

 ಮುಂದೊಂದು ದಿನ ಋಷಿಶಾಪವನ್ನುಲ್ಲಂಘಿಸಿ ಮಾದ್ರಿಯನ್ನು ಸ್ಪರ್ಶಿಸಿ ಪಾಂಡು ಸಾಯುತ್ತಾನೆ. ಈ ವಿವರ ಮಹಾಭಾರತದ ಆದಿಪರ್ವತದಲ್ಲಿದೆ.          

 (ಕೆ.ಎಸ್.ವಿ.)